ಶಿವ ದೇವಾಲಯದಲ್ಲಿ ಮಾಡುವ ಪ್ರದಕ್ಷಿಣೆಯನ್ನು ಸೋಮಸೂತ್ರ ಪ್ರದಕ್ಷಿಣೆ ಎಂದು ಕರೆಯಲಾಗುತ್ತದೆ. ಶಿವನ ದೇವಸ್ಥಾನದಲ್ಲಿ ಧ್ವಜಸ್ತಂಭದಲ್ಲಿ ಪ್ರದಕ್ಷಿಣೆಯನ್ನು ಪ್ರಾರಂಭಿಸಿ ಗರ್ಭಗುಡಿಗೆ ಪ್ರದಕ್ಷಿಣೆ ಹಾಕಿ ದೇವರ ದರ್ಶನ ಪಡೆಯಿರಿ. ಅಲ್ಲಿಂದ ಮತ್ತೆ ಧ್ವಜ ಸ್ತಂಭಕ್ಕೆ ಹಿಂತಿರುಗಿ, ಒಂದು ಕ್ಷಣ ಮತ್ತೇ ಪ್ರದಕ್ಷಿಣೆ ಪ್ರಾರಂಭಿಸಿ ಸೋಮಸೂತ್ರಕ್ಕೆ ಹೋಗಿ ಮತ್ತೆ ಧ್ವಜಸ್ತಂಭಕ್ಕೆ ಬರಬೇಕು. ಹೀಗೆ ಮಾಡುವುದರಿಂದ ಒಂದು ಸುತ್ತು ಮುಗಿಯುತ್ತದೆ.